ಚಿಗುರು
ಚಿಗುರು
‘ಚಿಗುರು’ ಕಾಲೇಜಿನ ಭಿತ್ತಿ ಪತ್ರಿಕೆ ಹಾಗೂ ವಾರ್ಷಿಕ ಸಂಚಿಕೆಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಅವರ ಸರ್ವತೋಮುಖ ಬೆಳವಣಿಗೆಗೆ ಅಗತ್ಯ. ಆದ್ದರಿಂದ ವಿದ್ಯಾರ್ಥಿಗಳ ಆಲೋಚನಾ ಸಾಮರ್ಥ್ಯವನ್ನು ಉತ್ತೇಜಿಸುವ ದೃಷ್ಟಿಯಿಂದ ಈ ಚಿಗುರು ವಾರ್ಷಿಕ ಸಂಚಿಕೆ ವಿದ್ಯಾರ್ಥಿಗಳಿಂದ ಉತ್ತಮ ಬರಹಗಳನ್ನು ಸ್ವೀಕರಿಸುತ್ತದೆ.
ಚಿಗುರು ಎನ್ನುವುದು ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿಗಳಿಗೋಸ್ಕರ ಇರುವಂತದ್ದು. ವಿಶೇಷವಾಗಿ ಚಿತ್ರಕಲೆ, ಕಥೆ, ಕವನ ಪೆನ್ ಆರ್ಟ್, ಪೆನ್ಸಿಲ್ ಸ್ಕೆಚ್ ಮುಂತಾದವುಗಳಿಗೆ ಹೆಚ್ಚಿನ ಆದ್ಯತೆ ಇದೆ. ಒಂದು ಭಾಷೆಯಲ್ಲಿ ನಮ್ಮ ಆಲೋಚನೆಗಳನ್ನು ಸಾಹಿತ್ಯಕ ರಚನೆಗಳ ಮೂಲಕ ಅಭಿವ್ಯಕ್ತ ಪಡಿಸುತ್ತೇವೆ. ಸಾಹಿತ್ಯಕ ರಚನೆಗಳು ನಿರ್ಮಾಣವಾಗಲು ಪ್ರತಿಭೆ ವ್ಯಕ್ತಿತ್ವ ಸ್ಪೂರ್ತಿ ಅಗತ್ಯ. ತಾನು ಕಂಡದ್ದನ್ನು ಮಾತ್ರವಲ್ಲ ಕಂಡದ್ದರ ಒಳಗನ್ನು ಮತ್ತು ಅದರ ಆಚೆಗೂ ಇರಬಹುದಾದ್ದನ್ನು ಗ್ರಹಿಸಿ ರೂಪಿಸುವ ಕಡೆಗೆ ಅವನ ಮನಸ್ಸು ತುಡಿಯುತ್ತದೆ. ಲೋಕದ ವಸ್ತುವಾಗಲಿ ವ್ಯಕ್ತಿಗಳಾಗಲಿ ಅನುಭವಗಳಾಗಲಿ ಸೃಜನಶೀಲ ಕಲಾವಿದನ ಕಣ್ಣಿಗೆ ಒಂದು ವಿಶೇಷವಾದ ಅರ್ಥವಂತಿಕೆಯನ್ನು ಯಾವಾಗ ಹೊಳೆಯಿಸುತ್ತವೆಯೋ ಆಗ ನಮ್ಮ ದೈನಂದಿನ ಚಿರಪರಿಚಿತವಾದ ವ್ಯಾವಹಾರಿಕ ನೆಲೆಯಿಂದ ಬೇರೊಂದು ಅರ್ಥಪೂರ್ಣವಾದ ನೀಲುವಿಗೆ ಏರುತ್ತೇವೆ. ಹೀಗೆ ಗೋಚರಿಸುವ ವಸ್ತುಗಳ ಒಳಗೆ ಬೇರೊಂದು ಅರ್ಥವನ್ನು ಕಾಣುವ ಸಾಮರ್ಥ್ಯವೇ ಪ್ರತಿಭೆ. ಹಲವು ಹೊಸತನದೊಂದಿಗೆ ವಿಭಿನ್ನವಾಗಿ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಪ್ರತಿಭೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇದರಲ್ಲಿ ಮಾಡಲಾಗಿದೆ.
News & Events
Apply Now
Seize the Opportunity – Embark on an Unforgettable Educational Adventure!