ಸಾಮಾಜಿಕ ಜಾಲತಾಣಗಳು ಅಂದರೆ ಅಂಗೈಯಲ್ಲಿ ಜಗತ್ತು ಇದ್ದಂತೆ. ಅವುಗಳನ್ನು ನಾವು ಸಕಾರಾತ್ಮಕವಾಗಿ ಬಳಸಬೇಕು. ಅವುಗಳಲ್ಲಿರುವ ಒಳಿತಿನ ಅಂಶಗಳನ್ನು ಮನಗಂಡು ಸೂಕ್ತ ರೀತಿಯಲ್ಲಿ ಹದವರಿತು ಉಪಯೋಗಿಸಬೇಕು ಎಂದು ಕನ್ನಡ ಉಪನ್ಯಾಸಕರಾದ ಶ್ರೀ ಸುಭಾಷ್ ಪಟ್ಟಾಜೆ ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿಗಳು ಆಯೋಜಿಸಿದ ’ಸಾಮಾಜಿಕ ಜಾಲತಾಣಗಳು ಮತ್ತು ಬಳಕೆ’ ಎಂಬ ವಿಚಾರ ಸಂಕಿರಣದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸಾಮಾಜಿಕ ಜಾಲತಾಣಗಳು ವ್ಯಕ್ತಿಯ ಬುದ್ಧಿಯ ಮಟ್ಟವನ್ನು ಕುಂಠಿತಗೊಳಿಸುತ್ತದೆ. ಸಂಬಂಧಗಳು ಯಾಂತ್ರಿಕವಾಗುತ್ತವೆ. ಕೇವಲ ಫೇಸ್ ಬುಕ್, ವಾಟ್ಸ್ಯಾಪ್ಗಳಲ್ಲಿ ಮಾತ್ರ ತಲ್ಲೀನರಾಗದೆ ಓದಿನ ಹವ್ಯಾಸವನ್ನು ಮೈಗೂಡಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಜೀವನ್ದಾಸ್ ವಹಿಸಿದ್ದರು.ಕಲಾ ವಿಭಾಗದ ವಿದ್ಯಾರ್ಥಿಗಳಾದ ಅರ್ಪಿತ್, ಅಮೂಲ್ಯ, ಶ್ರಾವ್ಯ, ಅಮೋಘ, ವಿಚಾರ ಮಂಡನೆಯನ್ನು ನಡೆಸಿದರು. ಕಾರ್ಯಕ್ರಮವನ್ನು ರಮ್ಯಾ ನಿರೂಪಿಸಿದರು. ದಿಶಾ ಅವರು ಸ್ವಾಗತಿಸಿ ಸುವಿತ್ರಾ ವಂದಿಸಿದರು.