ವಿವೇಕಾನಂದ ಪದವಿ ಪೂರ್ವಕಾಲೇಜಿನಲ್ಲಿ ಪ್ರಥಮ ವರ್ಷದ ಕಲಾ ವಿಭಾಗದ ವಿದ್ಯಾರ್ಥಿಗಳಿಂದ ವರದಕ್ಷಿಣೆಯ ಸಮಸ್ಯೆಗಳು ಎಂಬ ವಿಷಯದ ಕುರಿತು ವಿಚಾರ ಮಂಡನೆ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ವಿವೇಕಾನಂದ ಪದವಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀ ವಿಷ್ಣುಕುಮಾರ್ ಮಾತಾನಾಡಿ ವರದಕ್ಷಿಣೆಯು ಅನಾದಿ ಕಾಲದಿಂದಲೂ ಬಂದ ಸಾಮಾಜಿಕ ಸಮಸ್ಯೆಯಾದ್ದು, ಇದರಿಂದ ಹೆಣ್ಮಕ್ಕಳ ಜೀವನ ಹಾಳಾಗುತ್ತಿದೆ. ವರದಕ್ಷಿಣೆ ಎಂಬ ಸಮಸ್ಯೆ ವಿಶ್ವದ ನಾನಾ ದೇಶದಲ್ಲಿದೆ. ಆಧುನಿಕ ಕಾಲದಲ್ಲಿ ವರದಕ್ಷಿಣೆ ತೆಗೆದುಕೊಳ್ಳುವವರು ರಾಕ್ಷಸರಿಗೆ ಸಮಾನ.ಈ ಸಮಸ್ಯೆಯನ್ನು ಉತ್ತಮವಾದ ಶಿಕ್ಷಣ ಕೊಡುವುದರ ಮೂಲಕ ತಡೆಗಟ್ಟಲು ಸಾಧ್ಯ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜೀವನ್‌ದಾಸ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕಲಾ ವಿಭಾಗದ ವಿದ್ಯಾರ್ಥಿಗಳಾದ ಕು.ಚೈತ್ರಾ, ಕು. ಸ್ವರ್ಣಗೌರಿ, ಕು.ನೀತಾ, ಕು.ಕೃಪಾಲಿ ಮತ್ತು ಶ್ರೀರಾಮ್ ವಿಚಾರ ಮಂಡನೆ ಮಾಡಿದರು.ಶರತ್ ಅವರು ಸ್ವಾಗತಿಸಿ, ಅಭಿಷೇಕ್ ವಂದಿಸಿದರು. ಶ್ರೀ ಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.