ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಇತ್ತೀಚೆಗೆ Rock Climbing training Centre ಶಿಬಿರದಲ್ಲಿ ನಡೆದ Rock Climbing ಸ್ಫರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ ವಿದ್ಯಾರ್ಥಿ ಮೋಕ್ಷಿತ್ ಎಂ. ಎಲ್ ಭಾಗವಹಿಸುತ್ತಾರೆ. ಇವರು 100 ಅಡಿ ಎತ್ತರವನ್ನು 55 ಸೆಕಂಡುಗಳಲ್ಲಿ ಪೂರ್ಣಗೊಳಿಸುವುದರ ಮೂಲಕ ರಾಷ್ಟ್ರೀಯ ಮಟ್ಟದ ಸ್ಫರ್ಧೆಗೆ ಆಯ್ಕೆಯಾಗಿರುತ್ತಾರೆ. ಅದಲ್ಲದೆ ಪ್ಯಾರಾಜಂಪಿಂಗ್ ಸ್ಫರ್ಧೆಯಲ್ಲೂ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.. ಇವರು ಮಡಿಕೇರಿಯ ಸುಂಟಿಕೊಪ್ಪದ ನಿವಾಸಿ ಲೋಹಿತಾಶ್ವ ಎಂ. ಎನ್ ಮತ್ತು ಭಾರತಿ ಎಂ. ಎಲ್ ಇವರ ಸುಪುತ್ರ.