ರಾಜಕಾರಣದ ಏಣಿಯನ್ನೇರದೆ ಸ್ವಪ್ರತಿಭೆಯಿಂದಲೇ ಭಾರತದಾದ್ಯಂತ ಹೆಸರುವಾಸಿಯಾದ ಬೇಂದ್ರೆಯವರು ಚೈತನ್ಯಶೀಲ ಕವಿಗಳಾಗಿದ್ದರು ಎಂದು ಬೆಂದ್ರೆ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಶ್ಯಾಮ ಸುಂದರ ಬಿದಿರಕುಂದಿ ತಿಳಿಸಿದರು.
ಅವರು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಪುತೂರು ತಾಲೂಕು ಘಟಕ ಮತ್ತು ಬೇಂದ್ರೆ ಟ್ರಸ್ಟ್‌ನ ಧಾರವಾಡ ಜಂಟಿಯಾಗಿ ಆಯೋಜಿಸಿದ ದ ರಾ ಬೇಂದ್ರೆ ಕಾವ್ಯಾನುಭವ ಎಂಬ ವಿಷಯದ ಬಗ್ಗೆ ಮಾತಾಡಿದ ಅವರು ಬೇಂದ್ರೆಯವರ ವ್ಯುತ್ಪತ್ತಿ ದೊಡ್ಡ ಪ್ರಮಾಣವಾಗಿದ್ದು ಕನ್ನಡ, ಮರಾಠಿ, ಸಂಸ್ಕೃತ ಮತು ಇಂಗ್ಲೀಷ್ ಭಾಷೆಗಳಲ್ಲಿ ಅವರ ಓದು ಅಸಾಧಾರಣವಾಗಿತ್ತು. ಸಮಾಜದ ಜನರೊಂದಿಗೆ ಒಂದಾಗಿ ಬೆರೆತು ತಮ್ಮ ಪಂಚೇಂದ್ರಿಯಗಳ ಮೂಲಕ ಇಡೀ ವಿಶ್ವವನ್ನೇ ತಮ್ಮ ಪ್ರತಿಭೆಯ ಕನ್ನಡಿಯಲ್ಲಿ ಪ್ರತಿಫಲಿಸಿದ್ದಾರೆ. ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಬೇಂದ್ರೆಯವರ ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜೀವನ್ ದಾಸ್ ಸ್ವಾಗತಿಸಿದರು, ಕನ್ನಡ ಉಪನ್ಯಾಸಕರಾದ ಸುಭಾಷ್ ಪಟ್ಟಾಜೆ ವಂದಿಸಿದರು.