ವಿವೇಕಾನಂದ ವಸತಿ ನಿಲಯಗಳಿಗೆ ಅತ್ಯುತ್ತಮ ಫಲಿತಾಂಶ
ಸರ್ವಶ್ರೇಷ್ಠ ಶಿಕ್ಷಣ ಮತ್ತು ಮೌಲ್ಯಾಧಾರಿತ ಜೀವನ ಶೈಲಿಗೆ ಪ್ರಾಧಾನ್ಯತೆ ಕೊಡುತ್ತಾ ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿಯ ವಿಚಾರಗಳನ್ನು ಸದಾ ಕಾಲ ಉದ್ದೀಪಿಸುತ್ತಾ ಬರುತ್ತಿರುವ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ನಡೆಸಲ್ಪಡುವ ವಿವೇಕಾನಂದ ವಸತಿ ನಿಲಯಗಳಲ್ಲಿ ಕಲಿಯುತ್ತಿರುವ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು 2019 -2020 ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿತಾಂಶ ಅತ್ಯುತ್ತಮ ಫಲಿತಾಂಶ ದಾಖಲಿಸಿದ್ದಾರೆ.

ಹುಡುಗಿಯರ ವಸತಿನಿಲಯದಲ್ಲಿ 44 ಮಕ್ಕಳು ಉನ್ನತ ಶ್ರೇಣಿ, 62 ಪ್ರಥಮ ದರ್ಜೆ, 12 ದ್ವಿತೀಯ ದರ್ಜೆ, ಒಬ್ಬರು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.








ಹುಡುಗರ ವಸತಿನಿಲಯದಲ್ಲಿ 19 ಮಕ್ಕಳು ಉನ್ನತ ಶ್ರೇಣಿ, 84 ಮಕ್ಕಳು ಪ್ರಥಮ ದರ್ಜೆ, 3 ಮಕ್ಕಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.





ಕರ್ನಾಟಕದ ಹಲವು ಜಿಲ್ಲೆಗಳಿಂದ ಇಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಒಳ್ಳೆಯ ಫಲಿತಾಂಶ ದಾಖಲಿಸಿ ಕಾಲೇಜು ಮತ್ತು ವಸತಿನಿಲಯಗಳಿಗೆ ಕೀರ್ತಿ ತಂದಿದ್ದಾರೆ.































