Notice Board :

ಕನಸುಗಳು 2020

July 21, 2020

ಹತ್ತನೆಯ ತರಗತಿಗೆ ಬರಲಿರುವ ಹಾಗೂ SSLC ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ಸುವರ್ಣ ಅವಕಾಶ.

ದೇಹವನ್ನು ಲಾಕ್ ಡೌನ್ ಮಾಡಿರಬಹುದು
ಮನಸ್ಸುಗಳನ್ನಲ್ಲ..!
ಮುಖವನ್ನು ಬಟ್ಟೆಯಿಂದ ಮುಚ್ಚಿರಬಹುದು…
ಕನಸುಗಳನ್ನಲ್ಲ….!!

ಬನ್ನಿ, ನಿಮ್ಮ ಕನಸುಗಳನ್ನು ಸ್ವಚ್ಛಂದವಾಗಿ ಹಾರಲು ಬಿಡಿ…
ಆಕಾಶದಷ್ಟು ಅವಕಾಶಗಳನ್ನು ನಾವು ನೀಡುತ್ತೇವೆ…!!

ಕನಸುಗಳು 2020 Dreams 2020

ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು | ಮನೆಯಿಂದಲೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅವಕಾಶ

• ಸ್ಪರ್ಧೆಗಳಲ್ಲಿ 2019-20 ನೇ ಸಾಲಿನ ಮತ್ತು 2020-21 ನೇ ಸಾಲಿನ ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ.
• ಎಲ್ಲಾ ಸ್ಪರ್ಧೆಗಳಲ್ಲೂ ಒಬ್ಬ ವಿದ್ಯಾರ್ಥಿ ಮಾತ್ರ ಭಾಗವಹಿಸಬಹುದು. ತಂಡಗಳ ಸ್ಪರ್ಧೆಗಳಿಲ್ಲ.
• ಪ್ರತಿಯೊಂದು ಸ್ಪರ್ಧೆಯಲ್ಲೂ ವಿದ್ಯಾರ್ಥಿಗಳು ಕೋವಿಡ್ –19 ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲಾ ನಿಯಮಗಳನ್ನು ಪಾಲಿಸಬೇಕು.
• ಯಾವುದೇ ಸ್ಪರ್ಧೆಗೆ ಸಂಬಂಧಿಸಿದಂತೆ ಮನೆಯ ಆವರಣವನ್ನು ಬಿಟ್ಟು ಹೊರಗೆ ಹೋಗುವುದು ಮತ್ತು ಮನೆಯವರಲ್ಲದೆ ಹೊರಗಿನವರ ಸಂಪರ್ಕ, ಸಹಾಯ ಪಡೆಯುವಂತಿಲ್ಲ.
• ಪ್ರತಿಯೊಂದು ಸ್ಪರ್ಧಿಯೂ ತಮ್ಮ ಹೆಸರು ಮತ್ತು ಶಾಲೆಯನ್ನು ನಿರ್ಣಾಯಕರಿಗೆ ತಿಳಿಸಬೇಕು. ಜೊತೆಗೆ ತಮ್ಮ ಯಾವುದಾದರೊಬ್ಬ ಅಧ್ಯಾಪಕರ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನೂ ತಿಳಿಸಬೇಕು. ನಾವು ಆ ಅಧ್ಯಾಪಕರನ್ನು ಸಂಪರ್ಕಿಸಿ ನಿಮ್ಮ ಬಗ್ಗೆ ದೃಡೀಕರಿಸಿಕೊಳ್ಳುತ್ತೇವೆ.
• ಪ್ರತಿಯೊಂದು ಸ್ಪರ್ಧೆಗೂ ಕಾಲೇಜಿನ ವತಿಯಿಂದ ಒಬ್ಬರು ಅಥವಾ ಎರಡು ಅಧ್ಯಾಪಕರು ಉಸ್ತುವಾರಿ ವಹಿಸಿರುತ್ತಾರೆ. ವಿದ್ಯಾರ್ಥಿಗಳು ಸಂದೇಹಗಳಿಗೆ ಅವರನ್ನು ಸಂಪರ್ಕಿಸಬಹುದು.
• ಪ್ರತಿಯೊಂದು ಸ್ಪರ್ಧೆಗೂ ಉಸ್ತುವಾರಿ ಅಧ್ಯಾಪಕರನ್ನೊಳಗೊಂಡ ಪ್ರತ್ಯೇಕ ವಾಟ್ಸಾಪ್ ತಂಡಗಳಿರುತ್ತವೆ.
• ವಿದ್ಯಾರ್ಥಿಗಳು ಪ್ರತಿಯೊಂದಕ್ಕೂ ಪ್ರತ್ಯೇಕವಾಗಿ ತಮ್ಮ ಹೆಸರನ್ನು ಉಸ್ತುವಾರಿ ಅಧ್ಯಾಪಕರ ಮೂಲಕ ಹೆಸರನ್ನು ಸೇರ್ಪಡೆಗೊಳಿಸಿಕೊಳ್ಳಬೇಕು. ಆ ಸ್ಪರ್ಧೆಗೆ ಸಂಬಂಧಿಸಿದ ವಿವರಣೆಗೆಳು, ನಿಯಮಗಳು, ವಿಷಯಗಳು ಆಯಾ ಗ್ರೂಪಿನಲ್ಲಿ ಪ್ರಕಟವಾಗುತ್ತಿರುತ್ತವೆ.
• ಯಾವುದೇ ಸ್ಪರ್ಧೆಗಳಿಗೆ ಪ್ರವೇಶ ಶುಲ್ಕವಿರುವುದಿಲ್ಲ. ಎಲ್ಲವೂ ಉಚಿತವಾಗಿರುತ್ತದೆ. ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನಗಳಿರುತ್ತವೆ.
• ಈ ಸಂಧಿಗ್ಧ ಸಮಯದಲ್ಲಿ ವಿದ್ಯಾರ್ಥಿಗಳನ್ನು ಪೂರಕ ಕೆಲಸದಲ್ಲಿ ತೊಡಗಿಸಿಕೊಳ್ಳುವುದೇ ಈ ಕಾರ್ಯಕ್ರಮದ ಉದ್ದೇಶ.
• ಕೆಲವು ಸ್ಪರ್ಧೆಗಳು ಆನ್ ಲೈನ್ ಮೂಲಕ ನಡೆಯುವ ಕಾರಣ ವಿದ್ಯಾರ್ಥಿಗಳು ಗೂಗಲ್ ಮೀಟ್ ಆ‍್ಯಪ್‌ನ್ನು ಡೌನ್ ಲೋಡ್ ಮಾಡಬೇಕಾಗಬಹುದು.
• ಎಲ್ಲಾ ಸ್ಪರ್ಧೆಗಳಲ್ಲೂ ನಿರ್ಣಾಯಕರ ತೀರ್ಮಾನವೇ ಅಂತಿಮಾವಾಗಿರುತ್ತದೆ.
• ಪ್ರಸಕ್ತ ಸಂದಿಗ್ಧ ಸಮಯದಲ್ಲಿ ಮಾನಸಿಕ ತೊಳಲಾಟವನ್ನು ಹೋಗಲಾಡಿಸಲು ನಾವೆಲ್ಲರೂ ಈ ಸ್ಪರ್ಧೆಗಳಲ್ಲಿ ಸೇರಿ ಕನಸುಗಳನ್ನು ಕ‌ಟ್ಟೋಣ.
ಹೆಸರು ನೋಂದಾಯಿಸಲು ಕೊನೆಯ ದಿನಾಂಕ 23-07-2020

For More Details Contact :

97316 40407 (Sri Supreeth K.C.),
97420 01857 (Sri Shripathi),
99021 94905 (Sri Ajay Shastry)

[gview file=”https://vcpuc.vivekanandaedu.org/wp-content/uploads/2020/07/Compitition-List-Dreams-2020-final.pdf”]

Related News

#Dreams 2024 #ConcludingCeremony #Day2

#Dreams 2024 #Session #Day1

#Dreams 2024 #Inauguration #Day1

Apply Now

Seize the Opportunity – Embark on an Unforgettable Educational Adventure!

Sri Sudheer M K

Studied B.Sc. (P.E.M.) in St. Aloysius College Mangalore.

Completed M. Sc. Mathematics from Mangalore University in May 2001.

Having 21 years of teaching experience in different colleges in Mysore and Mangalore. Training students for KCET, JEE exams.

Mathematics

Dr. Sushanth V Rai

M.Sc., PhD 5 years exp. Five years record of success in nutritional, phytochemical and biomedical research.

Worked as quality control analyst in food industry.

Worked as Research Associate in Aquatic Environment Management Department, College of Fisheries, Mangalore.

Worked as Senior Research Fellow in Department of Biosciences, Mangalore University.

Published research papers in national and international journals.

Biology